Thursday 25 August 2011

ಶುಭ ಮುಂಜಾವು....



ಶುಭ ಮುಂಜಾವು

ಸೂರ್ಯನ ಕಿರಣ ಭೂಮಿಯನ್ನು ಸೋಕಿದ್ದಾಯ್ತು
ಇಬ್ಬನಿ ಅದರೊಂದಿಗೆ ಲಿನವಾಯ್ತು
ಹಿಕ್ಕಿಗಳೆಲ್ಲವು ಗೂಡು ಬಿಟ್ಟಾಯ್ತು
ನೀವು ಹಾಸಿಗೆಯಿಂದೇಳುವ ಸಮಯವಾಯ್ತು 
ಶುಭ ಮುಂಜಾವು ಸ್ನೇಹಿತರೇ.......

ಗೆಳತಿ...



ಗೆಳತಿ...

                     ಮುಂಗಾರು ಮಳೆಯೇ ..... ಏನು ನಿನ್ನ ಹನಿಗಳ ಲೀಲೆ ...ಈ ಮಳೆ ಹನಿಯ ಲೀಲೆಯನ್ನು ಅರಿತವರು ಯಾರು? 
        
         ಎದೆಯ ಮುಗಿಲಿಂದ ಮುಂಗಾರು ಮಳೆಯಂತೆ ನೆನಪುಗಳು  ರಭಸವಾಗಿ ಸುರಿಯುತ್ತವೆ. ಅದಕ್ಕೆ ಮನಸೆಂಬ ಕಾನನದ ಮರಗಳು ಹೊಯ್ದಾಡುತ್ತವೆ ದುಃಖ ಒತ್ತರಿಸಿಕೊಂಡು ಬರುತ್ತದೆ ಕ್ಷುಲ್ಲಕ ಕಾರಣವೊಡ್ಡಿ ಗೆಳೆತನಕ್ಕೆ ಕೊನೆ ಹೇಳಿದ್ದು ಮನಸ್ಸನ್ನು ಹಿಂಡಿ ಹಿಪ್ಪೆ ಮಾಡತ್ತೆ. 
ಮಳೆಗಾಲದ ದಿನಗಳು, ನಾನು ಅವಳು ಒಳ್ಳೆಯ ಗೆಳೆಯ ಗೆಳತಿಯರಾಗಿ ಒಂದೇ ಕೊಡೆಯೊಳಗೆ ಕೈ ಕೈ ಹಿಡಿದು ಬೀದಿ ಬೀದಿ ಸುತ್ತಿದ್ದು, ಪಾನಿಪೂರಿ ಅಂಗಡಿಗೆ ಲಗ್ಗೆ ಇಟ್ಟದ್ದು, ನೋಡುಗರ ಕಣ್ಣಿಗೆ ಪ್ರೇಮಿಗಳಂತೆ ಕಾಣಿಸಿದ್ದು, ಉಳಿದ ಗೆಳೆಯ ಗೆಳತಿಯರ ಕೆಂಗಣ್ಣಿಗೆ ಗುರಿಯಾಗಿದ್ದು ಇನ್ನು ಎದೆಯಲ್ಲಿ ಹಸಿಯಾಗಿದೆ. 
       
              ರಾಂಗ್ ನಂ. ಡೈಲ್ ಮಾಡಿ ಆ ಹುಡುಗಿಯ ಪರಿಚಯ ಬೆಳೆಸಿಕೊಂಡಿದ್ದೆ, ಮೃದು ಸ್ವಬಾವದವಳು, ಹೆಸರು "ಸಹನಾ" ಸಹನಾಮೂರ್ತಿಯೇ ಸರಿ.... ನಾನೆಷ್ಟೇ ಕಾಡಿದರು, ಕಿಟಲೆ ಮಾಡಿದರು ಸಹಿಸಿಕೊಂಡವಳು. ನನ್ನ ತಪ್ಪುಗಳನ್ನು ತಿದ್ದಿ ಒಳ್ಳೆಯ ಗೆಳತಿಯಾದವಳು. 'ಯಾರು ಏನೇ ಹೇಳಲಿ ನೀ ನನ್ನ ಬೆಸ್ಟ್ ಫ್ರೆಂಡ್ ಕಣೋ ಯಾವತ್ತು ಯಾವುದೇ ಕಾರಣಕ್ಕೆ ನಿನ್ನ ನನ್ನ ಲೈಫ್ನಿಂದ  ದೂರ ಮಾಡ್ಕೊಳಲ್ಲ' ಎಂದಿದ್ದಳು. ಹಾಗೇ ದೂರವಾಗಿ ಬಿಟ್ಟಿದ್ದಳು. ಅಲ್ಲ ಅಲ್ಲಾ ನಾನಾಗೆ ಅವಳನ್ನು ದೂರ ಮಾಡಿದ್ದೆ, ಅವಳ ಒಳಿತಿಗಾಗಿ ನನ್ನ ಕ್ಷಮಿಸು "ಗೆಳತಿ"          
          
       ಇದಕ್ಕೆಲ್ಲಾ ಕಾರಣ ಪ್ರೀತಿ, ಹೌದು ಅವಳೊಬ್ಬನನ್ನು ತುಂಬಾ ಪ್ರಿತಿಸುತಿದ್ದಳು, ಆ ಹುಡುಗನು ಅವಳನ್ನು ಇಷ್ಟ ಪಟ್ಟಿದ್ದ ಅನ್ನಿಸುತ್ತೆ. ನಮ್ಮಿಬ್ಬರ ಸ್ನೇಹದ ಬಗ್ಗೆ ಅವನಿಗೆ ತಿಳಿದು ಅವಳ ಮೇಲೆ ಸಂಶಯ ಪಟ್ಟಿರಲುಬಹುದು ಜಗಳವಾಡಿರಲುಬಹುದು , ಅದನ್ನೆಲ್ಲ ಅವಳು ನನ್ನೊಂದಿಗೆ ಹಂಚಿಕೊಂಡಿಲ್ಲ ಒಳಗೊಳಗೇ ನೋವನ್ನೆಲ್ಲಾ ಬಚ್ಚಿಟ್ಟಿದ್ದಳು. ಆದರೆ ನನಗರ್ಥ ಆಗಿತ್ತು ನನ್ನ ಗೆಳೆತನ ಅವಳ ಪ್ರೀತಿಯನ್ನು, ಅವಳ ವೈವಾಹಿಕ ಜೀವನವನ್ನು ಹಾಳು ಮಾಡಬಹುದೆಂದು.  ಅವಳಿಂದ ದೂರವಾಗಲು ಸರಿಯಾದ ಸಮಯಕ್ಕಾಗಿ ಕಾಯುತಿದ್ದೆ. 
                 
            ಇದೇ ಸಮಯದಲ್ಲಿ ಅವಳ ರೂಂ ಮೇಟ್ ಕಡೆಯಿಂದ ಒಬ್ಬ ಹುಡುಗನ ಪರಿಚಯ ಅವಳಿಗಾಯಿತು. ಅವನನ್ನು ನನಗೂ ಒಮ್ಮೆ ಪರಿಚಯಿಸಿದ್ದಳು, ನನ್ನ ತಲೆಯಲ್ಲಿ ಒಂದು ಮಾಸ್ಟರ್ ಪ್ಲಾನ್ ರೆಡಿ ಆಯಿತು. ಒಂದು ಸ್ವಲ್ಪ ದಿನ ಅವಳನ್ನು ಅವೈಡ್ ಮಾಡ್ದೆ. ಒಂದು ತಿಂಗಳ ಬಿಟ್ಟು ಫೋನ್ ಮಾಡಿ ಮನಸ್ಸಿಲ್ಲದ ಮನಸ್ಸಿನಿಂದ  'ಆ ಹೊಸ ಹುಡುಗನ ಗೆಳೆತನದಿಂದ ನಿನಗೆ ನನ್ನ ನೆನಪಿಲ್ಲ ಅಲ್ವಾ ಈವಾಗ ನಿಂಗೆ ನಾನು ನನ್ನ ಫ್ರೆಂಡ್ಶಿಪ್ ಬೇಡ ಅಲ್ವಾ? ನನಗಿಂತ ಆ ಹುಡುಗನೇ ಹೆಚ್ಚು ನಿಂಗೆ ಅವನ ಜೊತೆ ಊರೆಲ್ಲ ಸುತ್ತಾಡ್ತಿಯ' ಎಂದೆಲ್ಲಾ ಬೈದೆ.. 
 
            ಕಣ್ಣ ತುಂಬಾ ನೀರು ತುಂಬಿಕೊಂಡು 'ಹಾಗೆಲ್ಲ ಹೇಳಬೇಡವೋ ತುಂಬಾ ನೋವಾಗತ್ತೆ' ಎಂದಿದ್ದಳು ಆದ್ರೂ ನಾನು ಕೇರ್ ಮಾಡದೇ ಬೈತಾನೆ ಇದ್ದೆ. ನಂಗೆ ಕಾಲ್ ಮಾಡಬೇಡ ಮೆಸೇಜ್ ಮಾಡಬೇಡ ನನ್ನ ಕಾಂಟಾಕ್ಟ್ ಇಟ್ಕೋಬೇಡ ಅಂದಿದ್ದೆ. ಪಾಪದ ಹುಡುಗಿ ಅತ್ತು ಕೊಂಡು ಕಾಲ್ ಕಟ್ ಮಾಡಿದ್ಲು ಆನಂತರ ಅವಳ ಸಂಪರ್ಕ ಕಡಿದುಕೊಂಡಿದ್ದೆ. ನನ್ನ ನೋವನ್ನು ಅವಳಿಗೋಸ್ಕರ ಸಹಿಸಿಕೊಂಡಿದ್ದೆ. ದಿನಾ ದೇವರಲ್ಲಿ ಮೊರೆಯಿಡುತಿದ್ದೆ ಅವಳನ್ನು ಚೆನ್ನಾಗಿಟ್ಟಿರು ಅಂತಾ...
 
          ದೇವರಿಗೆ ನನ್ನ ಬೇಡಿಕೆ ಕೇಳಿದೆ ಅನ್ನಿಸುತ್ತೆ ಅವಳು ಗಂಡನ ಜೊತೆ ಆರಾಮಾಗಿದ್ದಾಳಂತೆ. ನಾನು ಬಯಸಿದ್ದು ಅದನ್ನೇ ತಾನೆ....
ಆದರೆ ಮಳೆಯೊಂದಿಗೆ ಬರುವ ಅವಳ ನೆನಪು ಮನವೆಂಬ ಕಪ್ಪೆ ಚಿಪ್ಪಲ್ಲಿ ಮುತ್ತಾಗಿ ಕುಳಿತಿದೆ..
 

ಪ್ರೀತಿ ಎಂಬ ಕಡಲು



ಪ್ರೀತಿ ಎಂಬ ಕಡಲು

ಪ್ರೀತಿ ಎಂಬುದೊಂದು ಕಡಲು 
ಬಿದ್ದಿದ್ದೆ ಬಾರದೆ ಈಜಲು 
ಹವಣಿಸಿದ್ದೆ ದಡ ಮುಟ್ಟಲು 
ಪಡೆದಿದ್ದೆ ನಿನ್ನ ಹೆಗಲು 
 
ನಮ್ಮ ಪ್ರೀತಿಯ ಪಯಣ 
ಮಾಡಿತ್ತು ಒಲುಮೆಯ ನರ್ತನ 
ಹೀಗೆ ಇರಲೆಂದಿತು ಮನ 
ಉಳಿಸಿಕೊಂಡರೆ ಜನ್ಮ ಪಾವನ
 
ಶುರುವಾದದ್ದು ಸ್ನೇಹದಿಂದ 
ಮುಗಿಯದಿರಲಿ ಮದುವೆಯಿಂದ 
ವರ ಬೇಡಿಹೆನು ದೇವರಿಂದ 
ಹಾರೈಸಿರಿ ಒಮ್ಮನಸಿನಿಂದ 
 

ಪ್ರೀತಿ


ಮೂಡಿತದೆಲಿಂದ ಈ ಪ್ರೀತಿ 

ಅರಿಯೆ ನಾ ಅದರ ರೀತಿ 
ತುಂಬಿದೆ ಮನದೊಳಗೆ ಭೀತಿ 
ನೀ ಮೀಟಿದೆ ಮೊದಲಾ ಶೃತಿ
ದಿನವೆಲ್ಲಾ ನಿನ್ನದೇ ಸ್ತುತಿ 
ಕಂಗಳಲಿ ನಿನ್ನದೇ ಮೊರ್ತಿ 
ಇರುವೆ ಇಲ್ಲದವರಂತೆ ಮತಿ 

ಸಂಗಾತಿಯೆಂದು



ಸಂಗಾತಿಯೆಂದು

ನಿನ್ನ "ಪ್ರಿಯೆ" ಎಂಬ ನುಡಿ 
ಕೇಳಲು ಕಾತರಿಸುತಿದೆ ಮನ 
ನನ್ನ ಮನದ ಭಾವನೆಗಳು 
ನಿನಗರ್ಥವಾಗುತಿಲ್ಲವೇಕೆ!?
 
ನಿನ್ನೆ ರಾತ್ರಿಯ ಕನಸುಗಳು 
ಇಂದು ನನಸಾಗುತಿಲ್ಲವೇಕೆ!!?
ನಿನ್ನ ತೋಳಿನಾಸರೆ ಪಡೆಯುವ 
ಬಯಕೆ ಈಡೇರುವುದೆಂದು ಹೇಳು!!!?
 
ನನ್ನ ನಿಶ್ಚಲವಾದ ಗುರಿಗಳು 
ಬುಡಕಿತ್ತ ಮರದಂತಾದುವೇಕೇ?
ಬೇರು ನೀಡಲಿಲ್ವದಕೆ  ಆಧಾರ!!!?
ನೀನಾ, ನನ್ನ ಕಲ್ಪನೆಯ ವೃಕ್ಷದ ಬೇರು!!!!?
 
ನಿನ್ನ ಅನಿಸಿಕೆಗಳನ್ನು ನನ್ನ 
ಜೊತೆ ಹಂಚಿಕೊಳ್ಳಲಿಲ್ಲವೇಕೆ!?
ನಾ ಬರಿಯ ಸ್ನೇಹಿತೆಯೆಂದೆ!!!!?
ಬಿಚ್ಚಿಡು ಮನವ ನಾ ಸಂಗಾತಿಯೆಂದು.....

ಸ್ನೇಹನಾ? ಪ್ರೀತಿನಾ?


ಸ್ನೇಹನಾ? ಪ್ರೀತಿನಾ?

ಸ್ನೇಹನಾ? ಪ್ರೀತಿನಾ?

                ಹೀಗೆ ಒಂದು ಪ್ರಶ್ನೆ ಫೇಸ್ ಬುಕ್ ನ ಕನ್ನಡ ಬ್ಲಾಗನಲ್ಲಿ ಕೇಳಲಾಗಿತ್ತು ಸ್ನೇಹ ಮುಖ್ಯನಾ? ಪ್ರೀತಿ ಮುಖ್ಯನಾ? ಅಂತಾ...
ಅದನ್ನು ನೋಡಿ ನಾನು ಯಾಕೆ ಇದರ ಬಗ್ಗೆ ಬರೆಯಬಾರದು ಅಂತಾ ಅನಿಸ್ತು... ಅದ್ಕೆ ಬರೀತಾ ಇದೀನಿ ಇಷ್ಟಾ ಆಯ್ತಾ ಇಲ್ವಾ? ಹೇಳಿ ಪ್ಲೀಸ್.....
 
         ನನ್ನ ಪ್ರಕಾರ ಸ್ನೇಹ ಮತ್ತು ಪ್ರೀತಿ ಎರಡು ಒಂದೇ ನಾಣ್ಯದ ಎರಡು ಮುಖಗಳು. ನಾಣ್ಯದ ಯಾವುದಾದರು ಒಂದು ಮುಖ ಇಲ್ಲಾಂದ್ರೆ ಅದಕ್ಕೆ ಯಾವುದೇ ಮೌಲ್ಯ ಎರಲ್ಲವೋ ಹಾಗೇ ಸ್ನೇಹ ಮತ್ತು ಪ್ರೀತಿ ಎರಡರಲ್ಲಿ ಒಂದು ಇಲ್ಲದೇ ಹೋದರೆ ಜೀವನದಲ್ಲಿ ಆ ವ್ಯಕ್ತಿಗೆ ಅಂತಹ ವೆಲ್ಯು ( ಮೌಲ್ಯ ) ಇರಲ್ಲ ಅಲ್ವಾ?.
                
           ಹಾಗೇ ಈ ಸ್ನೇಹ ಮತ್ತು ಪ್ರೀತಿನ ರೈಲು ಕಂಬಿಗೆ ಹೋಲಿಸಬಹುದು: ರೈಲು ಕಂಬಿಯ ಒಂದು ಬದಿ ಸ್ನೇಹ, ಒಂದು ಬದಿ ಪ್ರೀತಿ ಇದ್ದಾಗ, ಸ್ನೇಹದ ಕಡೆ ನಿಂತವರಿಗೆ ಸ್ನೇಹ ಒಂದು ಕೈ ಮೇಲೆ ಅನ್ನಿಸೋದು ಸಹಜ,ಹಾಗೇ ಪ್ರೀತಿಯ ಕಡೆ ನಿಂತ ಇನ್ಯಾರಿಗೋ ಪ್ರೀತಿ ಒಂದು ಕೈ ಮೇಲೆ ಅನ್ನಿಸಬಹುದು.ಅದೇ ರೈಲಿನಲ್ಲಿ ಪ್ರಯಾಣಿಸುತ್ತಿರುವವರಿಗೆ ಸ್ನೇಹ, ಪ್ರೀತಿ ಎರಡು ಮುಖ್ಯ ಅಲ್ವಾ? ಒಂದು ಹಳಿ ಏರುಪೇರಾದ್ರು ಗತಿ ಏನಾಗಬಹುದು ಊಹಿಸಿ......
              
               ಸ್ನೇಹ ಎಂದು ಅದರ ಬೆನ್ನಟ್ಟಿ ಅದಕ್ಕೇ "ಹೆಚ್ಚಿನ" ಪ್ರಾಮುಕ್ಯತೆ ನೀಡಿದರೆ ನಿಮ್ಮ ಪಾಲಿನ ಪ್ರೀತಿಯನ್ನು, ನಿಮ್ಮನ್ನು ಪ್ರಿತಿಸುವವರನ್ನು ಕಳೆದು ಕೊಳ್ಳಬೇಡಿ. ಅದೇ ರೀತಿ ಪ್ರೀತಿಯ ಹುಚ್ಚು ಹೊಳೆಯಲ್ಲಿ ಈಜುತ್ತ ದಡದಲ್ಲಿರುವ  ಸ್ನೇಹಿತರನ್ನು ಮರೆಯಬೇಡಿ. ಸುಳಿಯಲ್ಲಿ ಸಿಕ್ಕಿ ಒದ್ದಾಡುವಾಗ ಕಾಪಾಡಲು  ಸ್ನೇಹಿತರೇ ಬೇಕು.. ಪ್ರೀತಿ, ಸ್ನೇಹಾನ ಸಮ ಪ್ರಮಾಣದಲ್ಲಿ ಬೆರೆಸಿಕೊಂಡು ಜೀವನದ ಪಾಯಸದ ಸಿಹಿಯನ್ನು ಸವಿಯಿರಿ ಅದರ ಮಜವೇ ಬೇರೆ.....
 

ಬೆಳಕಿನಾಟ


 

ಬೆಳಕಿನಾಟಬೆಳಕಿನಾಟ

ಬಾಗಿಲಿನಿಂದ ಒಳ ಬಂದ ಬೆಳಗಿನ ಮೊದಲ ಸೂರ್ಯ ಕಿರಣ ಕಂಡಿದ್ದು ಹೀಗೆ ರಾತ್ರಿಯ ಅಲ್ಪ ವಿರಾಮದ ನಂತರ ಬೆಳಗಿನಿಂದ ನಮ್ಮ ಜೀವನ ಹೋರಾಟ ಪುನಃ ಪ್ರಾರಂಭ, ಈ ಹೋರಾಟಕ್ಕೆ ಕತ್ತಿ ಕೊಟ್ಟು ಸನ್ನದ್ದನನ್ನಾಗಿ ಮಾಡುವ ಹಂಬಲ ಇದ್ದರು ಇರಬಹುದೇನೋ  ಯಾರು ಬಲ್ಲರು??????? ಈ ಮೂಲಕ ಕಷ್ಟಗಳನ್ನು ಧೈರ್ಯದಿಂದ ಎದುರಿಸು ಎಂದು ಹೇಳುತ್ತಿರಬಹುದೇನೋ ಅನ್ನಿಸುತ್ತೆ ಅಲ್ವಾ???


ಯಾವ ಜನ್ಮದ ನಂಟೋ ಕಾಣೆ ನಾನು



ಯಾವ ಜನ್ಮದ ನಂಟೋ ಕಾಣೆ ನಾನು ಯಾವ ಜನ್ಮದ ನಂಟೋ ಕಾಣೆ ನಾನು ಯಾವ ಜನ್ಮದ ನಂಟೋ ಕಾಣೆ ನಾನು

 
ಪ್ರೀತಿಗೂ ಮುಂಗಾರಿಗೂ ಎಂಥ ಮಧುರ ಸಂಬಂಧ 
ಬಿಡಿಸಲಾಗದಂತದ್ದು ಸಡಿಲಿಸಲಾಗದಂತದ್ದು,
ಬಿಡಿಸಿದರೆ ಮತ್ತೆ ಸೇರಿಸಲಾಗದಂತದ್ದು,
ಅದೆಂಥಾ ನಂಟು ಈ ಮುಂಗಾರಿಗೆ?!!
 
ಇನಿಯನ ನೆನಪಾಗುವುದು ಮುಂಗಾರಿನಲ್ಲೇ,
ಪ್ರೀತಿಯ ಕೊಂಡಿ ಬೆಸೆಯುವುದು, ಬೆಸೆದದ್ದು;
ಗಟ್ಟಿಯಾಗುವುದು ಮುಂಗಾರಲ್ಲೇ.
ಅದೆಂಥಾ ಮಾಯೆ ಈ ಮುಂಗಾರಲ್ಲಿ?!!!
 
ಎಲ್ಲೋ ಹೋದಾಗ ಎಂದೋ ನೋಡಿದ 
ಅಪರಿಚಿತ ಮುಖವೊಂದು ಪರಿಚಿತವಾಗಿ;
ಪರಿಚಯ ಸ್ನೇಹ/ಪ್ರೇಮವಾಗುವುದು ಮುಂಗಾರಿನಲ್ಲೇ,
ಅದೆಂಥಾ ಶಕ್ತಿ ಈ ಮುಂಗಾರಿಗೆ?!!!!
 
ಬೋರೆಂದು ಸುರಿವ ಮಳೆಯಲ್ಲಿ 
ಇನಿಯನ ತೋಳ್ತೆಕ್ಕೆಯಲ್ಲಿ ಬಂದಿಯಾಗಿ 
ಬೆಚ್ಚನೆಯ ಪ್ರೀತಿ ಪಡೆವುದು ಮುಂಗಾರಲ್ಲಿ 
ಆಹಾ! ಎಂಥಾ ಸುಖ ಈ ಮುಂಗಾರು ಮಳೆಯಲ್ಲಿ ?!!!!!

ನೆನಪು


ನೆನಪೇ ನೆನಪೇ 
ನೀ  ಕಾಡದಿರು ಮತ್ತೆ 
ನೆನೆಪೆಂಬ ನೆಪದಲ್ಲಿ 
ನೆಪವಾದ ನೆನಪಾದೆ 
ನೀ ಕಾಡದಿರು ಮತ್ತೆ ಮತ್ತೆ 

ನೆನಪುಗಳೆಂದರೆ ಬರಿ ನೆನಪುಗಳೇ 
ನೆನೆದಾಗೆಲ್ಲ ನೆನಪಗುವಾ ನೆಪಗಳೇ
ಇಂದಿನದೆಲ್ಲ ನಾಳೆ ನೆನಪೇ 
ನಾಳೆಯು  ಇನ್ನೊಂದಿನ ನೆನಪೇ, 
ನೀ ಕಾಡದಿರು ಮತ್ತೆ ಮತ್ತೆ 

ಮುಪ್ಪಿನಲ್ಲಿ ಯಾವ್ವನದ ಸಿಹಿ ನೆನಪು 
ಯಾವ್ವನದಲ್ಲಿ ಬಾಲ್ಯದ ತುಂಟಾಟದ ನೆನಪು 
ಮಳೆಯಲ್ಲಿ ಕುರುಂ ಕುರುಂ ತಿಂಡಿಯ  ನೆನಪು 
ಚಳಿಗೆ ಬೆಚ್ಚಗಿನ ತೊಳ್ತೆಕ್ಕೆಯ ನೆನಪು 
ವಸಂತಕ್ಕೆ ಕೋಗಿಲೆಯ ನೆನಪು 
ನೀ ಕಾಡದಿರು ಮತ್ತೆ ಮತ್ತೆ

ಪ್ರೀತಿನಾ?


ಭಾವನೆಗಳಿಗೆ ಬಣ್ಣ ಹಚ್ಚಿ 
ಒಲವಿನ ರೂಪ ಕೊಟ್ಟು 
ಪ್ರೀತಿಯ ಲೇಪನಾ ಮಾಡಿದಾಗ 
ನಿನ್ನ ನಾ ಕಂಡೆ ಗೆಳಯಾ

ಜಡವಾದ ದಿನಗಳು
ಹೂವಿನಂತೆ ಹಗುರವಾಗಿ
ಸಂತಸವ ಚಿಮ್ಮಿಸಿದವು
ಇದ್ಯಕಾಗಿ ನೀ ಹೇಳುವೆಯಾ?

ನಯನ ನಿನ್ನ ನೋಡಿದಾಗ 
ಮನ ಮಾತಾಡಲು ಬಯಸಿದಾಗ 
ಅಂಜಿಕೆ ಮುಂದೆ ಬಂದಿತ್ತು
ನೀ ಕೇಳಿದ್ದೆ ಏನು ಹೆದರಿಕೆಯಾ?

ನೀ ಹೇಳಿದಾಗ ನಾ ನಂಬಿರಲಿಲ್ಲ 
ಮನ ಚಿಂತೆಯ ಗುಡಾಗಿತ್ತು
ಏನೆಂದು ತಿಳಿಯದಾಯಿತು 
ಹೃದಯ ಕೇಳಿತು ಇದೆ ಪ್ರೀತಿನಾ?