Wednesday 23 November 2011

ನಾನಾಗಬಹುದೇ??!!


ಹಕ್ಕಿಯಂತೆ ಬಾನಲ್ಲಿ ಹಾರಿ
ಚುಕ್ಕಿನ ಮುಟ್ಟಬಹುದೆ?
ಸಮುದ್ರದಾಳಕ್ಕೆ ಈಜಿ
ಕಪ್ಪೆ ಚಿಪ್ಪಲ್ಲಿ ಹುದುಗಬಹುದೇ?

ಕಾನನದ ಹಸಿರೆಲೆಗಳ
ಹಸಿರು ನಾನಾಗಬಹುದೆ?
ಗರಿಬಿಚ್ಚಿ ಕುಣಿಯುವ ನವಿಲ
ನಾಟ್ಯದ ವಯ್ಯಾರ ನಾನಾಗಬಹುದೆ?

ಇಂಪಾಗಿ ಸ್ವರ ಹೊಮ್ಮಿಸುವ
ಕೊಳಲ ದನಿ ನಾನಾಗಬಹುದೆ?
ತಕಧಿಮಿ ತೋಂ ಎಂದು ಕುಣಿವ
ನಾಟ್ಯರಾಣಿಯ ಗೆಜ್ಜೆ ನಾನಾಗಬಹುದೆ?

ಅತ್ತಿಂದಿತ್ತ ಹಾರುವ ಚಿಟ್ಟೆಯ
ರೆಕ್ಕೆಯ ಬಣ್ಣ ನಾನಗಬಹುದೇ?
ಕಣ್ಣ ಕೊಳದಿ ಈಜಾಡುವ
ಬಿಳಿಯ ಮೀನು ನಾನಾಗಬಹುದೆ/

ಪುಟಾಣಿ ಮಗುವಿನ ಹೆಜ್ಜೆಯ
ಒಲಾಟದ ಸೊಗಸು ನಾನಾಗಬಹುದೆ?
ಅದು ನುಡಿವ ತೊದಲು ಮಾತಿನ
ಸವಿ ಸವಿಯಬಹುದೇ?




Tuesday 22 November 2011

ಪರಿಸರ





ನಮ್ಮ ಸುತ್ತಲಿರುವ ಪರಿಸರ ನೀನೆಷ್ಟು ಸುಂದರ 
ಹಸಿರ ಉಟ್ಟು ಹೂ ಮೂಡಿದ ನೀ ಸುಮಧುರ 
ನೀ ಸಕಲ ಜೀವ ರಾಶಿಗಳೆಲ್ಲದರ ಆಗರ 
ನೆನ್ನಲ್ಲಿಹುದು ಖನಿಜ ಸಂಪನ್ಮೂಲಗಳ ಭಂಡಾರ 

ನದಿ ಹೊಳೆ - ಹಳ್ಳಗಳೆಂಬ ಹಾರ ತೊಟ್ಟು 
ಪಶು - ಪಕ್ಷಿ - ಮನುಷ್ಯರೆಂಬ ಮಕ್ಕಳ ಹೆತ್ತು 
ನಿನ್ನ ಜೀವನವನ್ನು ಇವರಿಗಾಗಿಯೇ ಮುಡಿಪಾಗಿಟ್ಟು
ಬದುಕಿರುವಂತಿದೆ ನೋವನೆಲ್ಲ ಮರೆತು ಬಿಟ್ಟು 

ಭೂಮಾತೆ ನಿನ್ನ ಕೋಮಲ ಚರಣಗಳಿಗೆ 
ವಂದಿಸಿದ್ದರಿಂದಾಯ್ತು ಸಂತಸ  ತನುಮನಗಳಿಗೆ
ನಿನ್ನ ನೋಡುತಿದ್ದಂತೆ ನನ್ನ ನಾ ಮರೆತೇ ಒಂದುಗಳಿಗೆ 
ಕನಸಿನ ಲೋಕದಲ್ಲಿ ವಿಹರಿಸಿದೆನಾ ಆ ಗಳಿಗೆ