Wednesday 28 September 2011

ಮಳೆಯ(ನದ) ಕಾರ್ಮೋಡ


ಬಾನಿನ ತುಂಬೆಲ್ಲಾ
ತುಂಬಿಹುದು ಕರಿಮೋಡ 
ಅದು ಭೂಮಿಯ ತಂಪು 
ಮಾಡುವುದು ನೋಡ???


ಮನದಲ್ಲಿ ತುಂಬಿಹೆ
ಚಿಂತೆಯ ಕಾರ್ಮೋಡ 
ಅದು ತೋರುವುದು 
ಚಿತೆಗೆ ದಾರಿಯ ನೋಡ!!!!!


ಕರಿ ಮುಗಿಲ ನೋಡು 
ಜೊತೆಗೆ ಧ(ರ)ಣಿಯಾ ನಗು 
ಕಪ್ಪು ಮೆಘದೊಳಗಿಂದ 
ಇನುಕುವನು ಬಿಳಿ ಚಂದ್ರ!!!!!? 


ಮನಸು ತಿಳಿಯಾಗಲಿಲ್ಲ 
ಬರಿಯ ಯೋಚನೆಯಿಂದ 
ಮಂಕಾದ ಮುಖದಲ್ಲಿ 
ಇಣುಕಲೂ ಇಲ್ಲ ಕಿರುನಗೆ!!!!!!


ಕಪ್ಪು ಮೋಡದಿಂದ ಮಳೆ 
ಚಿಂತೆಯಿಂದ ಕಣ್ಣಿರು 
ಮಳೆ ಬಂದರೆ ಕುಣಿವರು ಜನ 
ಕಣ್ಣಿರಿಂದೇಕೆ ನೆನೆವುದೋ ಮನ??!!!!!

ಮಳೆ


ಕತ್ತಲೆಯ ಕಾರ್ಮೋಡ ಕವಿದು 
ಆಗಿದೆ ಮನವೆಲ್ಲ ಚಿಂತೆಯ ಗೂಡು 
ಹಣ್ಣಾದೆ ನಿನ್ನ ನೆನೆ ನೆನೆದು 
ಹೇಗಿರುವೆ ನನ್ನ ಪ್ರಿಯ ವಧು?


ಇರುಳ ಕರಿ ಪರದೆ ಸರಿಸಿ 
ಅಮೃತದೊಲವಾ ಹರಿಸಿ 
ನಿನ್ನ ಪ್ರಿಯನನ್ನಾಲಂಗಿಸು
ಸಿಹಿ ಮುತ್ತ ನೀಡಿ 


ಚಂದ್ರನ ಮುತ್ತಿರುವ ತಾರೆಯಂತೆ 
ನಿನ್ನಿ ವದನದ ಸುತ್ತ ಮುಂಗುರುಳು 
ಹೂವ ಮುತ್ತಿಕ್ಕುವ ದುಂಬಿಯಂತೆ 
ನಿನ್ನ ಮುಖಕ್ಕೆ ನನ್ನೀ ಮುತ್ತುಗಳು 


ಹಗಲು ಇರುಳುಗಳು ಪ್ರಕೃತಿಯಾಟ
ನೋವು ನಲಿವುಗಳಲ್ಲಿ ಬಾಳಿನ ಪುಟ 
ಹೀಗೆ ಕಳೆದವೆಷ್ಟೋ ಸಂವತ್ಸರ 
ನಿನ್ನ ಈ ಎಲ್ಲ ನೆನಪುಗಳು ಅಮರ

ಮಧುರ ನೆನಪು


ಎದೆಯ ಕಡಲಿನಿಂದ 
ಹೊಮ್ಮಿದ ಮಧುರ ನೆನಪು 
ಜೀವನದ ಕಹಿ ವೇಳೆಯಲಿ 
ಜೊತೆಗಿರುವ ಸಿಹಿ ನೆನಪು 


ಸೂರ್ಯ ರಶ್ಮಿ ಸೋಕಿ 
ಮಂಜು ಕರಗುವಂತೆ 
ನೆನೆಪಿನಾಳದ ನೆನೆಪಿಂದ 
ಮರೆಯಿತೊಂದು ಕ್ಷಣ ನೋವು 


ನೆನಪ ಎಳೆಯ ಎಳೆದಾಗ 
ನೆನಪಾಗುವುದು ಮನದಲ್ಲಿ 
ಬಾಲ್ಯದ ತುಂಟಾಟಗಳು 
ಮಸುಕಾದ ನೆನೆಪುಗಳು 


ಗೆಳೆತಿಯರ ಜೊತೆಗೂಡಿ  ಆಡಿದ 
ಗೆಳೆಯರ ಜೊತೆ ಜಗಳ ಕಾದ
ಮರೆಯಲಾಗದ ಸವಿನೆನಪುಗಳ 
ಸಂಗ್ರಹವೇ ನಮ್ಮ ಬಾಳು

ನಿನ್ನ ನೆನಪು

ನಿನ್ನ ನೆನಪು ಸ್ಪೂರ್ತಿ ಏನಗೆ
ಬಾಳ ಕಥೆ ಬರೆಯಲು
ನಿನ್ನ ಮಾತು ಅಮೃತ ಸಿಂದು
ಸ್ನೇಹ ಪುಟದಲೂ

ನಿನ್ನ ನೋಟ ಚಿರವು
ಎನ್ನ ಕಣ್ಣಿನೊಳಗು
ನಿನ್ನ ಪ್ರೀತಿ ಅಮರ
ಎನ್ನ ಹೃದಯದೊಳಗೂ

ಮಾತಿನಲ್ಲೂ ಪ್ರೀತಿ ತೋರುವ
ನಿನ್ನ ಕಂದರೆನಗೆ ಒಲವು
ನಮ್ಮಿಬ್ಬರ ಹೃದಯ ಬೆಸೆದರೆ
ನಮ್ಮ ಪ್ರೇಮ ಎಲ್ಲಿರದು

ಆ ತುಟಿಯಂಚಿನ ಕಿರುನಗೆ
ಆ ಕಣ್ಣಂಚಿನ ತುಂಟನೋಟ
ನನ್ನೆದೆಯಲಿ ಅಳಿಯದಿರಲಿ
ನಿನ್ನನೆಂದು ನಾ ಮರೆಯದಿರಲಿ