Tuesday 22 November 2011

ಪರಿಸರ





ನಮ್ಮ ಸುತ್ತಲಿರುವ ಪರಿಸರ ನೀನೆಷ್ಟು ಸುಂದರ 
ಹಸಿರ ಉಟ್ಟು ಹೂ ಮೂಡಿದ ನೀ ಸುಮಧುರ 
ನೀ ಸಕಲ ಜೀವ ರಾಶಿಗಳೆಲ್ಲದರ ಆಗರ 
ನೆನ್ನಲ್ಲಿಹುದು ಖನಿಜ ಸಂಪನ್ಮೂಲಗಳ ಭಂಡಾರ 

ನದಿ ಹೊಳೆ - ಹಳ್ಳಗಳೆಂಬ ಹಾರ ತೊಟ್ಟು 
ಪಶು - ಪಕ್ಷಿ - ಮನುಷ್ಯರೆಂಬ ಮಕ್ಕಳ ಹೆತ್ತು 
ನಿನ್ನ ಜೀವನವನ್ನು ಇವರಿಗಾಗಿಯೇ ಮುಡಿಪಾಗಿಟ್ಟು
ಬದುಕಿರುವಂತಿದೆ ನೋವನೆಲ್ಲ ಮರೆತು ಬಿಟ್ಟು 

ಭೂಮಾತೆ ನಿನ್ನ ಕೋಮಲ ಚರಣಗಳಿಗೆ 
ವಂದಿಸಿದ್ದರಿಂದಾಯ್ತು ಸಂತಸ  ತನುಮನಗಳಿಗೆ
ನಿನ್ನ ನೋಡುತಿದ್ದಂತೆ ನನ್ನ ನಾ ಮರೆತೇ ಒಂದುಗಳಿಗೆ 
ಕನಸಿನ ಲೋಕದಲ್ಲಿ ವಿಹರಿಸಿದೆನಾ ಆ ಗಳಿಗೆ