Friday 15 November 2013

ಇನಿಯಾ ????


                                             ಇನಿಯಾ ????


ಇರುಳಾ ತಬ್ಬಿರುವ ಮೌನವೇ 
ಮಾತಾಡು ಬಾರಾ
ಕೆನ್ನೆಯ ಚುಂಬಿಸಿರುವ ಕಣ್ಣಿರೇ
ನಿನ್ನ ಕಥೆ ಹೇಳು ಬಾರಾ

ಕಾರಿರುಳಾ ಮೌನ ಮಾತಾಗುವ ಮಾತುoಟೇ 
ಕಣ್ಣಿರು  ಕಥೆ ಹೇಳಿದ ಕಥೆಯುoಟೇ
ದುಃಖ ಮರೆಸುವ ಮನವ ಬಯಸಿದರೆ
ದುಃಖದ ಮಡುವಲ್ಲಿ ಸಾಯುತಿರುವನ ಗೆಳೆತನ ಸಿಕ್ಕಿತೇ????!!! 

ಮುಸ್ಸಂಜೆಯ ಇರುಳಲ್ಲಿ ಜಿಟಿ ಜಿಟಿ ಮಳೆಯಲ್ಲಿ
ಮನೆಯ ಮೂಲೆಯಲ್ಲಿ  ಗೋಡೆಗಾನಿಸಿ
ಕುಳಿತು ಮನವ ಬರಿದು ಮಾಡಿಕೊಳ್ಳುತಿರುವ
ನಿನ್ನ  ದುಃಖಕ್ಕೆ ಏರುಳೆ ಸಾಕ್ಷಿ!!!!

ಜಲ್ಲನೆ ಮಿಂಚುವ ಮಿಂಚಿಗೆ
ಗಕ್ಕನೆ ಬೆದರಿ ಕಣ್ಣಿರುವರೆಸಿಕೊಳ್ಳುವ
ತನಗೆ ತಾನೇ ಸಮಾಧನಿಸಿಕೊಳ್ಳುವ
ಮನ ಇನಿಯನ ಪ್ರೆತಿಯ ಬಯಸಿತ್ತೆ ???

ಮರಗುಟ್ಟುವ ಚಳಿಯಲ್ಲಿ
ಮೆತ್ತನೆಯ ಶಾಲಹೊದ್ದು
ಗೆಳೆಯನಿಗಾಗಿ ಕಾದ ಚಳಿಗಾಲವೆಷ್ಟೂ
ನೀ ಬರದೆ ಹೋದೆನೆಂದು ಶಪಿಸಲಾರೆ!!!!

ಬೇಸಿಗೆಯ ಬೇಗೆಯಲ್ಲಿ
ನಿನ್ನ ಬೆಸುಗೆಯ ನೆನಪಾಗಿ ಮೈ ಬೆವೆತರು
ಬಿಸಿಲ ಬೇಗೆ ಗೆಂದು ಮನ ಸಮಾದಾನಿಸಿದ

ಗಳಿಗೆಗದರೂ ಮನ ನಿನ್ನ ಹಂಬಲಿಸದೇ ಇನಿಯಾ ????

Thursday 17 October 2013

ಆದ್ರೂ  ಅವನೀಲ್ಲದೆ ಅವಳಿಲ್ಲಾ



                ಮದುವೆಯಾಗಿ ಎರಡು ವರ್ಷವಾದರೂ  ಇನ್ನೂ  ನನ್ನನ್ನು ಅರ್ಥ ಮಾಡ್ಕೊಂದಿಲ್ಲಾ ಯಾವಗ ಅರ್ಥ ಮಾಡ್ಕೋತಿಯೋ ಎಂದು ಒಂದೇ  ಸಮನೆ ರೇಗುತಿದ್ದ. ‘ನೀನು ನನ್ನನೆಸ್ಟು ಅರ್ಥ ಮಾಡ್ಕೊಂಡಿದಿಯಾ?’  ಅಂತಾ ತಿರುಗಿ ಕೇಳಿದವಳ ಕಣ್ಣಲ್ಲೋ ಕಣ್ಣಿರ ಧಾರೆ!                                                                                                                                                                                                                                                                                      
                    ತಾನು  ಅತ್ತರೆ ಗಂಡ ಎದೆಗವಚಿಕೊಂಡು  ಸಮಾಧಾನ ಮಾಡಬೇಕು, ಕಣ್ಣಿರನ್ನು ಒರೆಸಿ, ತನ್ನನ್ನು ತಬ್ಬಿಕೊಳ್ಳಬೇಕು,  ಎಂಬ ಅವಳ ಆಸೆಗೆ  ಮದುವೆಯಾದ ಸ್ವಲ್ಪ ದಿನದಲ್ಲೇ ಮನದಟ್ಟಾಗಿತ್ತು, ಅವನಿಗೋ ಕಣ್ಣಿರನ್ನು ಕಂಡರೆ ಕೆಂಡದಂಥ ಕೋಪ. ತಕ್ಷಣ ಅವಳು ಮುಖ ತೊಳೆದುಕೊಂಡು ಬರಬೇಕು, ಇಲ್ಲಾಂದ್ರೆ ಪುನಃ ಬೈತಾನೆ. ಮುಖ ತೊಳೆಯುವ ನೆಪ ಮಾಡಿಕೊಂಡು ಗಂಟೆಗಟ್ಟಲೆ ಬಾತರೂಮಲ್ಲಿ ಅಳುತ್ತಾ ಕುತಿರ್ತಾಳೆ .                                                                                                    
              ಸಂಜೆ ಆಫೀಸ್ನಿಂದ ಮನೆ ಬಂದ ನಂತರ ಗಂಡನೊಂದಿಗೆ ಹರಟುವ ಕನಸು ಕಂಡವಳಿಗೆ ಕನಸೊಂದೇ ಜೋತೆಯಾಗಿರತ್ತೆ, ಅವನ ದಿನಚರಿಯೇ ಅದು ಬರೋದು ಲೇಟ್ ಆದ್ರೆ ಟೀವಿ ನೋಡೋದು ಇಲ್ಲಾಂದ್ರೆ ಅವನ ಡೆಲ್ ಲಾಪಿ ಅವನಿಗಾಗಿ ಕಾದಿರತ್ತೆ ಅದನ್ನು ನೋಡಿದವಳಿಗೆ ಮೈಯೆಲ್ಲಾ ಉರಿದು ಹೋಗತ್ತೆ,  ಅದಕ್ಕಾಗಿ ಅವಳು ಸಿರಿಯಲ್ಸ್ ನೋಡೋಕೆ ಶುರು ಮಾಡಿದ್ದಾಳೆ , ಇವತ್ತಾಗಿದ್ದು ಅದೇ ಅದಕ್ಕೆ ಈ ಜಗಳ ಹಾಗಂತ ಅವರಿಬ್ಬರಲ್ಲಿ ಪ್ರೀತಿ ಇಲ್ಲಂಥಾ ಅಲ್ಲಾ ಖಂಡಿತಾ ಇದೆ ಬೆಟ್ಟದಷ್ಟು.                                                                                                                                                                    
               ಆದ್ರೆ ಅದರ ಮದ್ಯೆ ಇಗೋ ಬಂದು ನಿಂತಿದೆ . ಅವಳೋ ಭಾವನಾ ಜೀವಿ  ಅವನಿಗೆ ಭಾವನೆಗಳನ್ನು ವ್ಯಕ್ತ ಪಡಿಸೋದು ಗೊತ್ತಿಲ್ಲಾ ಅದೇ ಅವರಿಬ್ಬರ ಪ್ರಾಬ್ಲಮ್ . ಆವಳ ಚಿಕ್ಕ ಪುಟ್ಟ ಸಂತೋಷಗಳಲ್ಲಿ ಅವನೂ ಪಾಲ್ಗೊಳ್ಳಬೇಕು, ಸಣ್ಣದೊಂದು ನೋವಾದರೂ ತಬ್ಬಿ ಸಂತೈಸಬೇಕು, ಮಾತು ಮಾತಿಗೂ ರಮಿಸಬೇಕು, ಕೋಪ ಬಂದಾಗ ಪುಟ್ಟದೊಂದು ಚಾಕಲೇಟ್ ಜೋತೆ ಒಲೈಸಬೇಕು, ರಜಾ ದಿನಗಳಲ್ಲಿ ತನಗೆ ಅಂಟಿಕೊಂಡಿರಬೇಕು, ಇಂತಹ ಅದೇಷ್ಟೋ ಮಿನಿ ಆಸೆಗಳು ಇಡೇರುವ ದಿನಕ್ಕಾಗಿ ಕಾಯುತಿದ್ದಾಳೆ,,  ಚಾತಕ ಪಕ್ಷಿಯಂತೆ... ವೀಕ್ ಎಂಡ್ಗಳಲ್ಲಿ ಗಂಡ ಪಕ್ಕದಲ್ಲಿದ್ರು, ಕಾಡುವ ಒಂಟಿತನ ಯಾವ ಶತ್ರುಗಳಿಗೂ ಬೇಡ ಎಂದುಕೊಳ್ಳುತ್ತಾಳೆ,  ಗಂಡ ಟೀವಿ ನೋಡುತ್ತಿದ್ದರೆ ಪವರ್ ಕಟ್ ಯಾವಾಗ ಮಾಡ್ತಾರೋ ಅಂದುಕೊಳ್ತಾಳೆ, ಅದನ್ನೆಲ್ಲಾ ಅವನಲ್ಲಿ ಹೇಳಿಕೊಂಡಿದ್ದಾಳೆ ಕೂಡ,                                                                                                                                                                                                                                                   
                   ಇಷ್ಟೇಲ್ಲಾ ಆದರೂ ಒಂದೇ ಒಂದು ದಿನ ಅವನನ್ನು ಬಿಟ್ಟೀರಲಾರದಷ್ಟು ಪ್ರೀತಿ “ ಅವನಿಲ್ಲದೇ ಅವಳಿಲ್ಲಾ ’’

 ಅವನೊಬ್ಬ ಪರ್ಫೆಕ್ಟ್ ಗಂಡ ಆದರೆ ಅವನಲ್ಲಿ ಸ್ನೇಹಿತನನ್ನು  ಹುಡುಕುತ್ತಿರುವ ಅವಳ ಹುಡುಕಾಟಕ್ಕೆ ಕೊನೆಯೆಂದೋ???????

Sunday 11 August 2013

ಮುಂಗಾರು ಮಳೆಯೇ ,,,,,,,,,,,, ಏನು ನಿನ್ನ ಹನಿಗಳ ಲೀಲೆ

         ಮಳೆಯ ಹನಿಯ ಲೀಲೆಯನ್ನು ಅರಿತವರ್ಯಾರೋ !!!!!!!!!! ಎದೆ ಮುಗಿಲಿನಿಂದ ಮುಂಗರುಮಳೆಯಂತೆ ನೆನಪುಗಳು ರಭಸವಾಗಿ ಸುರಿಯುತ್ತಿವೆ, ಅದಕ್ಕೆ ಮನಸೆಂಬ ಕಾನನದಲ್ಲಿನ ಮರಗಳ ಹೊಯ್ದ್ದಾಟಕ್ಕೆ ದುಃಖ ಒತ್ತರಿಸಿಕೊಂಡು ಬರುತ್ತದೆ .  ಕ್ಷುಲ್ಲಕ  ಕಾರಣ ಹೇಳಿ  ಗೆಳೆತನಕ್ಕೆ ಮಂಗಳ ಹಾಡಿದ್ದು ಮನಸನ್ನು ಹಿಂಡಿ ಹಾಕತ್ತೆ .
            ಇಂತಹದೇ ಒಂದು ಮಳೆಗಾಲದಲ್ಲೇ ಅಲ್ಲವೇ ನಾನು ಅವಳು ಒಳ್ಳೆಯ ಗೆಳಯ ಗೆಳತಿಯರಾಗಿದ್ದು, ಒಂದೇ ಕೊಡೆಯಲ್ಲಿ ಕೈ ಕೈ ಹಿಡಿದು ಧಾರವಾಡದ ಬೀದಿ ಬೀದಿ ಸುತ್ತಿದ್ದು, ಪಾನಿಪೂರಿ ಅಂಗಡಿಗೆ ಲಗ್ಗೆ ಇಟ್ಟಿದ್ದು, ನೋಡುಗರ ಕಣ್ಣಿಗೆ ಪ್ರೇಮಿಗಳಂತೆ ಕಾಣಿಸಿದ್ದು , ಫ್ರೆಂಡ್ಸ್ ಸರ್ಕಲ್ ಅಲ್ಲಿ ಅಸೂಯೆಗೆ ಒಳಗಾಗಿದ್ದು, ನಾನೆಷ್ಟೇ ಕಾಡಿದರು, ಕೀಟಲೆ ಮಾಡಿದರೂ , ಸಹಿಸಿಕೊಂಡ “ಸಹನಾ”ಮೂರ್ತಿ. ನನ್ನ ತಪ್ಪುಗಳನ್ನು ತಿದ್ದಿ ಒಳ್ಳೆಯ ಗೆಳತಿಯಾದವಳು. “ಯಾರು ಏನೇ ಹೇಳಲಿ ನೀ ನನ್ನ ಬೆಸ್ಟ್ ಫ್ರೆಂಡ್ ಕಣೋ ಯಾವತ್ತೂ ನಿನ್ನಾ ನನ್ನ ಲೈಫಿಂದ ದೂರ ಮಾಡ್ಕೊಳಲ್ಲಾ ಎಂದವಳು ಹಾಗೆ ದೂರವಾಗಿ ಬಿಟ್ಟಿದ್ದಳು.
                 ಇದಕ್ಕೆಲ್ಲಾ ಕಾರಣ ಲವ್. ಹೌದು ಅವಳು ಒಬ್ಬನ್ನನ್ನು ತುಂಬಾ ಪ್ರೀತಿಸುತಿದ್ದಳು, ಅವನು ಕೂಡ ಅವಳನ್ನು ಅಷ್ಟೇ ಇಷ್ಟಾ ಪಡ್ತಾ ಇದ್ದ.  ಅವನು ಪೊಸೆಸಿವ್ ಕಣೋ ನಾನು ಯಾರ ಹತ್ರಾನೂ ಫ್ರೀಯಾಗಿರೋದು ಅವನಿಗೆ ಇಷ್ಟ ಆಗಲ್ಲ ಬೈತಾನೆ ಅಂದಿದ್ಲು ಹೀಗೆ ಒಮ್ಮೆ ಮಾತಾಡುತ್ತಾ ಕುಳಿತಾಗ ಆನಂತರ ಹೆಚ್ಚು ಬೇಟಿ ಕೂಡ ಆಗಿರಲಿಲ್ಲ . ಸಂತೋಷವನ್ನು ಮಾತ್ರ ಹಂಚಿಕೊಂಡು ಹೆಚ್ಚಿಸಿಕೊಳ್ಳಬೇಕು ದುಃಖನಲ್ಲಾ ಅಂತಿದ್ಲು  ಯಾವಾಗಲೂ ಹಾಗೇ ಅವಳ ಹುಡುಗ ನನ್ನ ವಿಷಯಕ್ಕಾಗಿ ಅವಳೊಂದಿಗೆ ಜಗಳವಾಡಿದ್ದನ್ನು ಮುಚ್ಚಿಟ್ಟಿದ್ದಳು ಅವಳ ಗೆಳತಿಯ ಕಡೆಯಿಂದ ನನಗೆ ತಿಳಿಯಿತು.
               ಇದೇ ಟೈಮಲ್ಲಿ ಅವಳ ಕಸಿನ್ ಊರಿಂದ ಬಂದಿದ್ದ, ನನಗೂ ಪರಿಚಯಿಸಿದ್ದಳು, ನನಗೋಸ್ಕರ ಏನೆಲ್ಲಾ ಮಾಡಿಲ್ಲ ಅವಳು ಸೋ ಅವಳಿಗಾಗಿ ನನ್ನ ಫ್ರೆಂಡ್ಶಿಪ್ನ ಬಿಟ್ಟಕೊಡಲು ರೆಡಿ ಆಗಿ, ಒಂದು ಪ್ಲಾನ್ ಮಾಡಿದೆ . ಅವಳೊಂದಿಗೆ ಜಗಳ ಮಾಡಿದೆ ನಿನ್ನ ಕಸಿನ್ ಬಂದಾಗಿನಿಂದ ನಂಗೆ ಕಾಲ್ ಮೆಸೇಜ್ ಎಲ್ಲಾ ಕಡ್ಮೆ ಮಾಡಿದಿಯಾ? ಈಗ ನಿಂಗೆ ನಾನು ನನ್ನ ಗೆಳೆತನ ಬೇಡವಾಗಿದೆ ಅಂತೆಲ್ಲಾ ಬೈದೆ, ಪಾಪ ಕಣ್ಣಲ್ಲಿ ನೀರು ತುಂಬಿಕೊಂಡುಹಾಗೆಲ್ಲ ಹೇಳಬೇಡ ಕಣೋ ತುಂಬಾ ನೋವಗತ್ತೆಅಂದಿದ್ಲು
                       ನಾನು ಕೇರ್ ಮಾಡದೇ ಮತ್ತೂ ಬೈತಾನೆ ಇದ್ದೆ  . ನಂಗೆ ಕಾಲ್ ಮಾಡಬೇಡ, ಮೆಸೇಜ್ ಮಾಡಬೇಡ, ಕಾಂಟಾಕ್ಟ್ ಮಾಡಬೇಡ ಅಂದಿದ್ದೆ . ಅತ್ತುಕೊಂಡು ಹೋಗಿದ್ಲು ಪಾಪ !!!! ಆನಂತರ ಅವನ್ನು ಮೀಟ್ ಮಾಡಿರಲಿಲ್ಲ ಫೋನ್ ಕಾಲ್ , ಮೆಸೇಜ್  ಯಾವುದಕ್ಕೂ ರೆಸ್ಪಾನ್ಸ್ ಮಾಡಿರಲಿಲ್ಲ . ಬೆಕಂತಾನೆ aviod  ಮಾಡ್ದೆ, ನನ್ನ ನೋವನ್ನ ಸಹಿಸಿಕೊಂಡೆ .
                       ಇದೆಲ್ಲಾ ಆಗಿದ್ದು 2009 ರಲ್ಲಿ ಈಗ ಅವಳು ಮದುವೆಯಾಗಿ ಕುಶಿ ಕುಶಿಯಾಗಿದ್ದಾಳಂತೆ, ಮೊನ್ನೆ ಅವಳ ಫ್ರೆಂಡ್ ಸಿಕ್ಕಿದ್ಲು ಫೋರಮ್ ಮಾಲ್ ಅಲ್ಲಿ, ಅವಳು  ಹೇಳಿದ್ಲು. ನಾನು ಬಯಸಿದ್ದು ಅದೇ ತಾನೇ !!!!!!!

  ಆದರೆ ಮಳೆಹನಿಯೊಂದಿಗೆ ಬರುವ ಅವಳ ನೆನೆಪು ಮನವೆಂಬ ಕಪ್ಪೆ ಚಿಪ್ಪಲ್ಲಿ ಮುತ್ತಾಗಿ ಕುಳಿತಿದೆ