Sunday 11 August 2013

ಮುಂಗಾರು ಮಳೆಯೇ ,,,,,,,,,,,, ಏನು ನಿನ್ನ ಹನಿಗಳ ಲೀಲೆ

         ಮಳೆಯ ಹನಿಯ ಲೀಲೆಯನ್ನು ಅರಿತವರ್ಯಾರೋ !!!!!!!!!! ಎದೆ ಮುಗಿಲಿನಿಂದ ಮುಂಗರುಮಳೆಯಂತೆ ನೆನಪುಗಳು ರಭಸವಾಗಿ ಸುರಿಯುತ್ತಿವೆ, ಅದಕ್ಕೆ ಮನಸೆಂಬ ಕಾನನದಲ್ಲಿನ ಮರಗಳ ಹೊಯ್ದ್ದಾಟಕ್ಕೆ ದುಃಖ ಒತ್ತರಿಸಿಕೊಂಡು ಬರುತ್ತದೆ .  ಕ್ಷುಲ್ಲಕ  ಕಾರಣ ಹೇಳಿ  ಗೆಳೆತನಕ್ಕೆ ಮಂಗಳ ಹಾಡಿದ್ದು ಮನಸನ್ನು ಹಿಂಡಿ ಹಾಕತ್ತೆ .
            ಇಂತಹದೇ ಒಂದು ಮಳೆಗಾಲದಲ್ಲೇ ಅಲ್ಲವೇ ನಾನು ಅವಳು ಒಳ್ಳೆಯ ಗೆಳಯ ಗೆಳತಿಯರಾಗಿದ್ದು, ಒಂದೇ ಕೊಡೆಯಲ್ಲಿ ಕೈ ಕೈ ಹಿಡಿದು ಧಾರವಾಡದ ಬೀದಿ ಬೀದಿ ಸುತ್ತಿದ್ದು, ಪಾನಿಪೂರಿ ಅಂಗಡಿಗೆ ಲಗ್ಗೆ ಇಟ್ಟಿದ್ದು, ನೋಡುಗರ ಕಣ್ಣಿಗೆ ಪ್ರೇಮಿಗಳಂತೆ ಕಾಣಿಸಿದ್ದು , ಫ್ರೆಂಡ್ಸ್ ಸರ್ಕಲ್ ಅಲ್ಲಿ ಅಸೂಯೆಗೆ ಒಳಗಾಗಿದ್ದು, ನಾನೆಷ್ಟೇ ಕಾಡಿದರು, ಕೀಟಲೆ ಮಾಡಿದರೂ , ಸಹಿಸಿಕೊಂಡ “ಸಹನಾ”ಮೂರ್ತಿ. ನನ್ನ ತಪ್ಪುಗಳನ್ನು ತಿದ್ದಿ ಒಳ್ಳೆಯ ಗೆಳತಿಯಾದವಳು. “ಯಾರು ಏನೇ ಹೇಳಲಿ ನೀ ನನ್ನ ಬೆಸ್ಟ್ ಫ್ರೆಂಡ್ ಕಣೋ ಯಾವತ್ತೂ ನಿನ್ನಾ ನನ್ನ ಲೈಫಿಂದ ದೂರ ಮಾಡ್ಕೊಳಲ್ಲಾ ಎಂದವಳು ಹಾಗೆ ದೂರವಾಗಿ ಬಿಟ್ಟಿದ್ದಳು.
                 ಇದಕ್ಕೆಲ್ಲಾ ಕಾರಣ ಲವ್. ಹೌದು ಅವಳು ಒಬ್ಬನ್ನನ್ನು ತುಂಬಾ ಪ್ರೀತಿಸುತಿದ್ದಳು, ಅವನು ಕೂಡ ಅವಳನ್ನು ಅಷ್ಟೇ ಇಷ್ಟಾ ಪಡ್ತಾ ಇದ್ದ.  ಅವನು ಪೊಸೆಸಿವ್ ಕಣೋ ನಾನು ಯಾರ ಹತ್ರಾನೂ ಫ್ರೀಯಾಗಿರೋದು ಅವನಿಗೆ ಇಷ್ಟ ಆಗಲ್ಲ ಬೈತಾನೆ ಅಂದಿದ್ಲು ಹೀಗೆ ಒಮ್ಮೆ ಮಾತಾಡುತ್ತಾ ಕುಳಿತಾಗ ಆನಂತರ ಹೆಚ್ಚು ಬೇಟಿ ಕೂಡ ಆಗಿರಲಿಲ್ಲ . ಸಂತೋಷವನ್ನು ಮಾತ್ರ ಹಂಚಿಕೊಂಡು ಹೆಚ್ಚಿಸಿಕೊಳ್ಳಬೇಕು ದುಃಖನಲ್ಲಾ ಅಂತಿದ್ಲು  ಯಾವಾಗಲೂ ಹಾಗೇ ಅವಳ ಹುಡುಗ ನನ್ನ ವಿಷಯಕ್ಕಾಗಿ ಅವಳೊಂದಿಗೆ ಜಗಳವಾಡಿದ್ದನ್ನು ಮುಚ್ಚಿಟ್ಟಿದ್ದಳು ಅವಳ ಗೆಳತಿಯ ಕಡೆಯಿಂದ ನನಗೆ ತಿಳಿಯಿತು.
               ಇದೇ ಟೈಮಲ್ಲಿ ಅವಳ ಕಸಿನ್ ಊರಿಂದ ಬಂದಿದ್ದ, ನನಗೂ ಪರಿಚಯಿಸಿದ್ದಳು, ನನಗೋಸ್ಕರ ಏನೆಲ್ಲಾ ಮಾಡಿಲ್ಲ ಅವಳು ಸೋ ಅವಳಿಗಾಗಿ ನನ್ನ ಫ್ರೆಂಡ್ಶಿಪ್ನ ಬಿಟ್ಟಕೊಡಲು ರೆಡಿ ಆಗಿ, ಒಂದು ಪ್ಲಾನ್ ಮಾಡಿದೆ . ಅವಳೊಂದಿಗೆ ಜಗಳ ಮಾಡಿದೆ ನಿನ್ನ ಕಸಿನ್ ಬಂದಾಗಿನಿಂದ ನಂಗೆ ಕಾಲ್ ಮೆಸೇಜ್ ಎಲ್ಲಾ ಕಡ್ಮೆ ಮಾಡಿದಿಯಾ? ಈಗ ನಿಂಗೆ ನಾನು ನನ್ನ ಗೆಳೆತನ ಬೇಡವಾಗಿದೆ ಅಂತೆಲ್ಲಾ ಬೈದೆ, ಪಾಪ ಕಣ್ಣಲ್ಲಿ ನೀರು ತುಂಬಿಕೊಂಡುಹಾಗೆಲ್ಲ ಹೇಳಬೇಡ ಕಣೋ ತುಂಬಾ ನೋವಗತ್ತೆಅಂದಿದ್ಲು
                       ನಾನು ಕೇರ್ ಮಾಡದೇ ಮತ್ತೂ ಬೈತಾನೆ ಇದ್ದೆ  . ನಂಗೆ ಕಾಲ್ ಮಾಡಬೇಡ, ಮೆಸೇಜ್ ಮಾಡಬೇಡ, ಕಾಂಟಾಕ್ಟ್ ಮಾಡಬೇಡ ಅಂದಿದ್ದೆ . ಅತ್ತುಕೊಂಡು ಹೋಗಿದ್ಲು ಪಾಪ !!!! ಆನಂತರ ಅವನ್ನು ಮೀಟ್ ಮಾಡಿರಲಿಲ್ಲ ಫೋನ್ ಕಾಲ್ , ಮೆಸೇಜ್  ಯಾವುದಕ್ಕೂ ರೆಸ್ಪಾನ್ಸ್ ಮಾಡಿರಲಿಲ್ಲ . ಬೆಕಂತಾನೆ aviod  ಮಾಡ್ದೆ, ನನ್ನ ನೋವನ್ನ ಸಹಿಸಿಕೊಂಡೆ .
                       ಇದೆಲ್ಲಾ ಆಗಿದ್ದು 2009 ರಲ್ಲಿ ಈಗ ಅವಳು ಮದುವೆಯಾಗಿ ಕುಶಿ ಕುಶಿಯಾಗಿದ್ದಾಳಂತೆ, ಮೊನ್ನೆ ಅವಳ ಫ್ರೆಂಡ್ ಸಿಕ್ಕಿದ್ಲು ಫೋರಮ್ ಮಾಲ್ ಅಲ್ಲಿ, ಅವಳು  ಹೇಳಿದ್ಲು. ನಾನು ಬಯಸಿದ್ದು ಅದೇ ತಾನೇ !!!!!!!

  ಆದರೆ ಮಳೆಹನಿಯೊಂದಿಗೆ ಬರುವ ಅವಳ ನೆನೆಪು ಮನವೆಂಬ ಕಪ್ಪೆ ಚಿಪ್ಪಲ್ಲಿ ಮುತ್ತಾಗಿ ಕುಳಿತಿದೆ